Subtitle

ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನ ಕುಂಭಾಶಿ

Some description text for this item

ಅದ್ಭುತ ಕಾರಣಿಕ ಕ್ಷೇತ್ರದಲ್ಲಿ ಒಂದಾದ ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನದ ಪರಿಚಯ :-
ಇತ್ತೀಚಿನ ಒಂದು ದಶಕದಲ್ಲಿ ಸ್ಥಾಪನೆಗೊಂಡ ದೇವಾಲಯಗಳಲ್ಲಿ ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕುಂಭಾಸಿಯ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನವು ಅತ್ಯಂತ ಶೀಘ್ರವಾಗಿ ಪ್ರಸಿದ್ಧಿ ಪಡೆದ ದೇವಾಲಯಗಳಲ್ಲಿ ಒಂದಾಗಿದೆ.
ಸಪ್ತ ಋಷಿಗಳ ತಪೋ ಭೂಮಿಯಾದ ಪುರಾಣ ಪ್ರಸಿದ್ಧ ಕ್ಷೇತ್ರವಾದ ಕುಂಭಾಸಿಯು ದಕ್ಷಿಣ ಕಾಶಿ ಎಂದೇ ಪ್ರಶ್ಯಾತಿಯನ್ನು ಹೊಂದಿದೆ. ಇಂತಹ ಕಾರಣೀಕರ್ತ ಸ್ಥಳದಲ್ಲಿ ಜಗತ್ ಪ್ರಸಿದ್ಧಿಯನ್ನು ಪಡೆದ ಆನೆಗುಡ್ಡೆ ಮಹಾಗಣಪತಿ ದೇವರು ಹಾಗೂ ಸೂರ್ಯ, ಚಂದ್ರ, ಪುಷ್ಕರ್ಣೆಯನ್ನು ಹೊಂದಿದೆ. ಹರಿಹರ ದೇವಸ್ಥಾನ ಅಯ್ಯಪ್ಪ ದೇವಾಲಯ ಹೀಗೆ ಹಲವಾರು ದೇವಾಲಯಗಳ ಜೊತೆಯಲ್ಲಿ ಕೈಲಾಸದಲ್ಲಿ ಪರಶಿವನ ಸಾನಿಧ್ಯದಲ್ಲಿ ಇರುವ ಎಲ್ಲಾ ಶಕ್ತಿಗಳು ಇಲ್ಲಿ ನೆಲೆಯಾಗಿದ್ದು ಇದೀಗ ಆದಿಶಕ್ತಿ ಮಹಾಮಾಯೆಯಾದ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ಅಮ್ಮನವರು ದಿವ್ಯ ಸಾನಿಧ್ಯದಲ್ಲಿ ನೆಲೆಯಾಗಿ ಸಂಪೂರ್ಣ ಭೂಕೈಲಾಸವಾಗಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ – 66 ರ ಪಕ್ಕದಲ್ಲಿಯೇ ಸುಂದರ ಭವ್ಯ ದೇವಾಲಯವಾಗಿ ಮೂಡಿ ಬಂದಿದೆ.

ಇದಕ್ಕೆಲ್ಲ ಕಾರಣೀಕರ್ತರಾದವರು ದೇವಿಯ ಆರಾದಕರಾದ ಶ್ರೀಮತಿ ಅನಿತಾ ಹಾಗೂ ಶ್ರೀಯುತ ದೇವರಾಯ ಮಂಜುನಾಥ ಶೇರೆಗಾರರವರು. ಮೂಲತಃ ಗಂಗೋಳ್ಳಿಯವರಾದ ರಾಮಕ್ಷತ್ರೀಯ ಸಮಾಜದವರಾದ ಹೊಸ್ಮನೆ ಕೀರ್ತಿಶೇಷ ಗೌರಮ್ಮ ಹಾಗೂ ಕೀರ್ತಿಶೇಷ ಮಂಜುನಾಥ ಶೇರೆಗಾರ ಇವರ ಸುಪುತ್ರರು.

ದೇವಿಯ ಆರಾದಕರಾದ ಶ್ರೀಯುತ ದೇವರಾಯ ಮಂಜುನಾಥ ಶೇರೆಗಾರರಿಗೆ ಕನಸಿನಲ್ಲಿ ಅಮ್ಮನವರು ಪ್ರತ್ಯಕ್ಷಳಾಗಿ ಕಾಣಿಸಿಕೊಂಡು ಈ ಸ್ಥಳದಲ್ಲಿ ನನ್ನ ಸಾನಿಧ್ಯವಿದ್ದು ನನಗೆ ಒಂದು ಆಲಯವನ್ನು ನಿರ್ಮಾಣ ಮಾಡಿ ಕೊಡಬೇಕೆಂದು ಸೂಚನೆ ನೀಡಿದಾಗ ಭಗ್ವದ್ಭಕ್ತರಾದ ಶ್ರೀಯುತ ದೇವರಾಯರು ತನ್ನ ಹಿತೈಷಿಗಳು ದೇವಿ ಆರಾಧಕರಾದ ಕಾರ್‍ದಾಂಡ ಮುಂಬಯಿ ಇಲ್ಲಿಯ ವಾಸಿ ಶ್ರೀಯುತ ಪುರಷೋತ್ತಮ ಭಟ್ಟರ ಮಾರ್ಗದರ್ಶನದಲ್ಲಿ ಕೇರಳದ ಪೈಯನ್ನೂರಿನ ಪ್ರಸಿದ್ದ ಜೋಯಿಸರಾದ ಶ್ರೀಯುತ ಎ. ವಿ. ಮಾಧವನ್ ಪುದುವಾಳ ಇವರ ನೇತೃತ್ವದಲ್ಲಿ ಅಷ್ಠಮಂಗಳ ಪ್ರಶ್ನೆಯನ್ನಿಟ್ಟು ಪ್ರಾರ್ಥಿಸಿಕೊಳ್ಳುತ್ತಾರೆ. ಆ ಪ್ರಕಾರ ಪ್ರಶ್ನಾಭಾಗದಲ್ಲಿ ತಿಳಿಸಿದಂತೆ. ಈ ಸಾನಿಧ್ಯವು ಒಂದು ಚೈತನ್ಯದಿಂದ ಕೂಡಿದ ಸ್ಥಾಳವಾಗಿಯೂ ಹಿಂದೆ ವಾದಿರಾಜರ ಕಾಲದಲ್ಲಿ ಶ್ರೀಚಕ್ರವನ್ನು ಪೂಜಿಸಲ್ಪಟ್ಟಿದ್ದು ನಂತರ ಅಲ್ಲಿಯೇ ಶ್ರೀಚಕ್ರವು ಐಕ್ಯವಾಗಿದ್ದು ಅಲ್ಲದೇ ಶ್ರೀಯುತರು ದೇವಿ ಆರಾಧಕರಾದ ಕಾರಣ ಶ್ರೀ ದೇವಿಯು ಅವರ ಜೊತೆಯಲ್ಲಿಯೇ ಇದ್ದು ಅವರ ಬೆಂಗಾವಲಾಗಿ ರಕ್ಷಣೆಯನ್ನು ನೀಡುತ್ತಿದ್ದು ಅಲ್ಲದೆ ಮನೆಯಲ್ಲಿ ಕೊಲ್ಲೂರು ಮೂಕಾಂಬಿಕೆಯನ್ನು ಆರಾದಿಸಿಕೊಂಡು ಬರುತ್ತಿದ್ದರು. ಎಂದು ತಿಳಿದು ಬಂತು.

ಆಕಾರಣಕ್ಕಾಗಿಯೇ ಶ್ರೀಯುತ ದೇವರಾಯರು ಒಂದು ಭವ್ಯ ಸುಂದರವಾದ ದೇವಾಲಯವನ್ನು ನಿರ್ಮಾಣ ಮಾಡುವ ಯೋಜನೆಯನ್ನು ಮಾಡಿದರು. ಹಾಗೇ ನಿರಂತರ ಆರುವರೆ ವರ್ಷಗಳ ಕಾಲ ಸಾವಿರಾರು ಕಾರ್ಮಿಕ ವರ್ಗದವರು ಶ್ರಮವಹಿಸಿ ಈ ಸುಂದರ ದೇವಾಲಯವನ್ನು ನಿರ್ಮಾಣ ಮಾಡಿದರು. ದೇವಾಲಯವು ಬಹಳ ವಿಶಿಷ್ಠತೆಯಿಂದ ಕೂಡಿದೆ. ಗರ್ಭಗ್ರಹವು ಶಿಲಾಮಯದಿಮದ ಕೂಡಿದ್ದು ಬಹಳ ಸುಂದರವಾದ ಕೆತ್ತನೆಯಿಂದ ಕೂಡಿ ಬಂದಿದೆ. ಹಾಗೆ ದೇವಾಲಯದ ಪ್ರಾಂಗಣ ಹಾಗೂ ಮೇಲ್ಭಾಗದಲ್ಲಿ ಮರದ ಕೆತ್ತನೆಗಳು ಸುಂದರವಾದ ವಿಗ್ರಹಗಳು ಹೂ ಬಳ್ಳಿಗಳು ಕುಂಭ ಹಾಗೂ ಅಡ್ಡ ತೊಲೆಗಳು ಸುಂದರವಾಗಿ ಮೂಡಿ ಬಂದಿದ್ದು ಭಕ್ತರ ಮನ ಸೂರೆಗೊಳ್ಳುವಂತಿದೆ. ವಿಶೇಷವಾಗಿ ಕಾಷ್ಠ ಮರದ ಕೆತ್ತನೆಯಿಂದ ಕೂಡಿದ ಕಂಭಗಳು ಅದರಲ್ಲಿ ಚೋಳರ ಕಾಲದ ಕೆತ್ತನೆಗಳು, ಹೊಯ್ಸಳರ ಕಾಲದ ವಿಗ್ರಹಗಳು, ಬೇಲೂರು ಹಳೆಬೀಡಿನಲ್ಲಿ ಇರುವಂತಹ ಮರದ ವಿಗ್ರಹಗಳು. ಮಹಾದ್ವಾರದ ಮೇಲ್ ಚಾವಣಿಯಲ್ಲಿ ಭಕ್ತರು ನಿಬ್ಬೆರಗಾಗಿಸುವ ರೀತಿಯಲ್ಲಿ ಬೇರೆ ಬೇರೆ ರೀತಿಯ ಹೂಗಳು ಬಳ್ಳಿಗಳ ಮನಮೋಹಕ ದೃಷ್ಯ. ಈ ಎಲ್ಲಾ ಮರದ ಕೆತ್ತನೆಗಳನ್ನು ನೊಡಿದ ಭಕ್ತರು ಒಂದು ಸಲ ದಿಗ್ಭ್ರಮೆಗೊಂಡು ಉಲ್ಲಾಸ ಭರಿತರಾಗುವಂತೆ ಮಾಡುವ ಮರದ ಕೆತ್ತನೆಯಿಂದಲೇ ಈ ಆಲಯವು ವಿಶ್ವ ವಿಖ್ಯಾತಿಯನ್ನು ಪಡೆದಿದೆ. ಆಲಯದ ಹೊರಭಾಗದಲ್ಲಿ ದೇವಳಕ್ಕೆ ಶೋಭೆ ತರುವಂತೆ ಆಲದ ಮರ ಅದರ ಬುಡದಲ್ಲಿ ನಾಗ, ನಾಗಯಕ್ಷೆ, ಸ್ವರ್ಣಯಕ್ಷೆ ಹಾಗೂ ಕ್ಷೇತ್ರಪಾಲ ಪರಿವಾರ ದೇವರ ಶಿಲಾಮಯವಾದ ಪೀಠಗಳು ಸುಂದರವಾಗಿ ಶೋಭಿಸುತ್ತಿದೆ. ದೇವಳದ ಮುಂಭಾಗದಲ್ಲಿ ಸುಮಾರು 35 ಅಡಿ ಎತ್ತರದ ವಿಮಾನ ಗೋಪುರ ಅದರಲ್ಲಿ ದೇವಿಯ ನಾನಾ ರೂಪದ ವಿಗ್ರಹಗಳು ರಾತ್ರಿ ಹೋತ್ತಿನ ಬೆಳಕಿನಲ್ಲಿ ಸುಂದರವಾಗಿ ಕಾಣುತ್ತದೆ. ಹಾಗೇದೇವಾಕಯದ ಹೊರಸುತ್ತಿನ ಗೊಡೆ ಹಾಗೂ ಚಾವಣಿಯ ಮೇಲ್ಭಾಗದಲ್ಲಿ ಜಗನ್ಮಾತೆಯ ನಾನಾ ವಿಧಧ ವಿಗ್ರಹಗಳು ಮನಮೋಹಕರುಪದಲ್ಲಿ ಕಂಗೋಳಿಸುತ್ತಿದೆ. ದೇವಾಲಯದ ಮುಂಭಾಗದಲ್ಲಿ ಶಿಲಾಮಯ ಪುಷ್ಕರ್ಣೆ ಅದರಲ್ಲಿ ವರ್ಷದ ಕೊನೆಯವರೆಗೂ ಜಲದಿಂದ ತುಂಬಿರುತ್ತದೆ ನೋಡಲು ನಯನ ಮನೋಹರವಾಗಿದೆ.

ಹಾಗೇ ತಾಯಿಯ ಚಂಡಿಕಾ ಹೋಮ ಸೇವೆ ಮಾಡಲು ವಿಶಾಲವಾದ ಶಿಲಾಮಯ ಯಾಗ ಮಂಟಪ ನೋಡಿದರೆ ಯಾರನ್ನು ನಿಬ್ಬೆರಗಾಗಿಸುತ್ತದೆ.
ಹಾಗೂ ರಾಷ್ಟ್ರೀಯ ಹೆದ್ದಾರಿ – 66 ರಲ್ಲಿ ಜಗನ್ ಮಾತೆಯ ದರ್ಶನಕ್ಕೆ ಭಕ್ತರನ್ನು ಕೈಬಿಸಿ ಕರೆಯುವಂತೆ ಕಾಣುವ 75 ಅಡಿ ಎತ್ತರದ ಬ್ರಹದಾಕಾರದ ರಾಜ ಗೋಪುರ ಕರ ಕುಶಲ ನೈಪುಣ್ಯತೆಯಿಂದ ಕೂಡಿದ್ದು ಒಮ್ಮೆ ನೋಡಿದರೆ ತಾಯಿ ಒಳಗಡೆ ಬರುವಂತೆ ಕೈ ಬೀಸಿ ಕರೆದಂತೆ ಭಾಸವಾಗುತ್ತದೆ.

ಹಾಗಾಗಿಯೇ ಇಂದು ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಾಲಯ ನೋಡುಗರ ಕಣ್ಮನ ಸೆಳೆಯುವ ತಾಣವಾಗಿ ಮೂಡಿ ಬಂದಿದೆ.
ಪ್ರಶ್ನಾ ಭಾಗದಲ್ಲಿ ಬಂದಂತೆ ದೇವಾಲಯದ ಒಳಭಾಗದಲ್ಲಿ ಪರಿವಾರ ದೇವರಾದ ಶ್ರೀ ಮಹಾಗಣಪತಿ, ಶ್ರೀ ಶ್ರೀನಿವಾಸ ದೇವರ ಗುಡಿಗಳು ಸುಂದರವಾಗಿ ಮೂಡಿ ಬಂದಿದೆ. ಹಾಗೇ ಪ್ರಧಾನ ದೇವರಾದ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ಅಮ್ಮನವರ ಗರ್ಭ ಗುಡಿಯು ವಿಶಾಲವಾಗಿ ಸುಂದರವಾಗಿದ್ದು ತಾಯಿ ಪದ್ಮಾಸನ ಭಂಗಿಯಲ್ಲಿ ಕುಳಿತಿದ್ದು ನಾಲ್ಕು ಬಾಹುಗಳಲ್ಲಿ ತ್ರಿಶೂಲ, ಚಕ್ರ, ಹಾಗೂ ಅಭಯ, ವರದ ಹಸ್ತದಿಂದ ಕೂಡಿದ ಪಂಚ ಲೋಹದಲ್ಲಿ ವಿರಾಜಮಾನಳಾಗಿದ್ದಾಳೆ.

ಇಂದು ಈ ಭವ್ಯ ಸುಂದರ ದೇವಾಲಯದಲ್ಲಿ ತನ್ನ ಅಭಯ ಹಸ್ತದಿಂದ ಭಗ್ವಧ್ಭಕ್ತರಿಗೆ ಹರಸುವ ತಾಯಿಯಾಗಿ ಮೂಡಿ ಬಂದಿದ್ದಾಳೆ. ಈಗಾಗಲೇ ರಾಜ್ಯ, ದೇಶ, ವಿದೇಶದವರೆಗೆ ಪ್ರಚಾರ ಪಡೆದಿರುವ ದೇವಾಲಯವು ಈಗಾಗಲೇ ಲಕ್ಷಾಂತರ ಭಕ್ತರ ಆರಾಧ್ಯ ತಾಯಿಯಾಗಿ ಇಷ್ಠಾರ್ಥವನ್ನು ಈಡೇರಿದ ನಿದರ್ಶನಗಳು ಇದೆ. ಹಾಗೇ ದೇಶ, ವಿದೇಶದಿಂದ ಆಗಮಿಸಿದ ಭಕ್ತರು ತಾಯಿಯ ಸೇವಾ ರೂಪವಾಗಿ ಸಪ್ತಶತೀ ಪಾರಾಯಣ, ಪಂಚ ದುರ್ಗಾದೀಪ ನಮಸ್ಕಾರ, ತುಲಾಭಾರ ಸೇವೆ, ಹಾಗೂ ಚಂಡಿಕಾ ಹೋಮವನ್ನು ಹಾಗೂ ಇನ್ನಿತರ ಸೇವೆಯನ್ನು ಕುಟುಂಬ ಸಮೇತರಾಗಿ ಆಗಮಿಸಿ ಸೇವೆಯನ್ನು ಮಾಡುತ್ತಿದ್ದಾರೆ. ಹಾಗಾಗಿ ಇಂದು ಭಕ್ತರ ಇಷ್ಟಾರ್ಥವನ್ನು ಬಹುಬೇಗ ಈಡೇರಿಸುವ ತಾಯಿಯಾಗಿ ಕುಂಭಾಸಿಯಲ್ಲಿ ನೆಲೆಯಾಗಿದ್ದಾಳೆ.